ಟೆಲ್ ಅವೀವ್, ಮಾ.15: ಹಾವು ಕಡಿತದಿಂದ ಮನುಷ್ಯರು ಸಾಯುವುದು ಸಾಮಾನ್ಯ ಸುದ್ದಿ. ಆದರೆ, ಮನುಷ್ಯರನ್ನು ಕಡಿದ ಹಾವು ಮೃತಪಟ್ಟರೆ, ಅದು ವಿಚಿತ್ರ ಸುದ್ದಿ. ಇಲ್ಲೊಬ್ಬಳು ಆಧುನಿಕ ವಿಷಕನ್ಯೆ ಇದ್ದಾಳೆ. ಆ ಮಹಿಳೆಯೊಬ್ಬಳ ಸ್ತನಕ್ಕೆ ಕಚ್ಚಿದ ಹಾವು ಪ್ರಾಣ ಬಿಟ್ಟಿದೆ. ಹಾವಿನ ಸಾವಿಗೆ ಕಾರಣ ಆಕೆಯದ್ದು ನೈಸರ್ಗಿಕ ಸ್ತನವಲ್ಲ, ಬದಲಿಗೆ ಸಿಲಿಕಾನ್ ಸ್ತನ.

ಹಲವಾರು ಬಾರಿ ‘ಎದೆಗಾರಿಕೆ’ ಹೆಚ್ಚಿಸಿಕೊಂಡಿದ್ದ ಒರಿಟ್ ಫಾಕ್ಸ್ ರನ್ನು ರೇಡಿಯೋ ಚಾನಲ್ಲೊಂದು ಕಾರ್ಯಕ್ರಮದ ಪ್ರಚಾರಕ್ಕೆಂದು ಫೋಟೋಶೂಟ್ ಗೆ ಕರೆಸಿಕೊಂಡಿತ್ತು. ಫೋಟೋಶೂಟಿಗಾಗಿ ಪಳಗಿದ ಹೆಬ್ಬಾವು (boa constrictor) ವನ್ನು ತರಲಾಗಿತ್ತು. ಆರಂಭದಲ್ಲಿ ಹೆಬ್ಬಾವು ಸರಿಯಾಗಿಯೇ ಈಕೆಗೆ ಸಹಕರಿಸಿದೆ. ಈಕೆ ಕೈಯಲ್ಲಿ ಹಾವನ್ನು ಹಿಡಿದುಕೊಂಡು ತನ್ನ ತುಟಿಗಳ ಹತ್ತಿರ ತೆಗೆದುಕೊಂಡು ಚುಂಬಿಸಿದಾಗಲೂ ಮಾಡಿರಲಿಲ್ಲ.
ಮನುಷ್ಯ ಹಾವಿಗಿಂತ ವಿಷ: ಆದರೆ, ಚುಂಬನದ ನಂತರ ಹಾವಿಗೆ ಏನಾಯಿತೋ ಗೊತ್ತಿಲ್ಲ. ವಿಪರೀತವಾಗಿ ಆಡಲಾರಂಭಿಸಿ, ಏಕಾಏಕಿ ಆಕೆಯ ಎಡ ಸ್ತನವನ್ನು ಕಚ್ಚಿ ಹಿಡಿದಿದೆ. ಹಾವಿನ ಮಾಲೀಕ ಬೆದರಿಸಿದರೂ ಹಾವೂ ಮಾತ್ರ ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಸುಮಾರು ಅರ್ಧ ನಿಮಿಷದಷ್ಟು ಹೊತ್ತು ಕಚ್ಚಿ ಹಿಡಿದಿತು. ಕೊನೆಗೆ ಪ್ರಯಾಸಪಟ್ಟು ಹಾವಿನ ಕಡಿತದಿಂದ ಬಿಡಿಸಲಾಯಿತು.
ಹಾವಿನಿಂದ ಕಚ್ಚಿಸಿಕೊಂಡ ಫಾಕ್ಸ್ ಗೆ ಹೆಚ್ಚಾಗಿ ಘಾಸಿಯಾಗಿಲ್ಲ. ಪ್ರಥಮ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಉತ್ತರ ಜೆರುಸುಲೇಂನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ, ಆಕೆಯ ಸ್ತನವನ್ನು ಕಚ್ಚಿದ್ದ ಹಾವು ಕೆಲವೇ ಕ್ಷಣದಲ್ಲಿ ಸಿಲಿಕಾನ್ ವಿಷದಿಂದ ಮೃತಪಟ್ಟಿದೆ. ಸ್ತನ ಗಾತ್ರ ಹೆಚ್ಚಿಸಿಕೊಂಡು ಮೆರೆಯುತ್ತಿದ್ದ ರೂಪದರ್ಶಿಯ ಎದೆಗೆ ಒಂದು ಬಲಿ ಬಿದ್ದಿದೆ.