ಉತ್ತರ ಜಪಾನ್‌ನಲ್ಲಿ 8.9ರಷ್ಟು ತೀವ್ರತೆಯ ಭಾರೀ ಪ್ರಮಾಣದಭೂಕಂಪದ ಬೆನ್ನಲ್ಲೇ ಉತ್ತರ ಕರಾವಳಿಯಲ್ಲಿ ಎದ್ದ ರಕ್ಕಸ ಅಲೆಯ ಸುನಾಮಿಯ ಅಲೆಗೆ ಸಾವಿರಾರು ಕಟ್ಟಡ, ಕಾರುಗಳು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಸುನಾಮಿ ತಂದ ಅವಾಂತರ ಏನು:
13 ಅಡಿ ಎತ್ತರದ ರಕ್ಕಸ ಗಾತ್ರದ ಅಲೆಗಳು
ನೀರಿನಲ್ಲಿ ಕೊಚ್ಚಿ ಹೋದ ಕಾರು, ಕಟ್ಟಡಗಳು
ಪರಮಾಣು ಘಟಕ, ವಿಮಾನ ನಿಲ್ದಾಣ ಬಂದ್
ರಷ್ಯಾ,ನ್ಯೂಜಿಲ್ಯಾಂಡ್, ಮೆಕ್ಸಿಕೋ, ಚಿಲಿ, ಪೆರು, ತೈವಾನ್, ಫಿಲಿಫೈನ್, ಇಂಡೋನೇಷ್ಯಾ, ಆಸ್ಟ್ರೇಲಿಯಾಗಳಲ್ಲೂ ಸುನಾಮಿ ಎಚ್ಚರಿಕೆ
ಹೊತ್ತಿ ಉರಿಯುತ್ತಿರುವ ತೈಲ ಘಟಕಗಳು
ಜನವಸತಿ ಪ್ರದೇಶಕ್ಕೆ ನುಗ್ಗಿದ ನೀರು
ರಾಜಧಾನಿ ಟೋಕಿಯೋದಲ್ಲಿ ಕಂಪನದ ಅನುಭವ
ರಕ್ಷಣೆಗಾಗಿ 900 ಜನರ ತಂಡ.
ಜಪಾನ್ ಕಾಲಮಾನ ಮಧ್ಯಾಹ್ನ 2.46ಕ್ಕೆ ಘಟನೆ ಸಂಭವಿಸಿದೆ
25 ಜನರ ಸಾವು, ಈ ಸಂಖ್ಯೆ ಮತ್ತಷ್ಟು ಹೆಚ್ಚಳ ಸಾಧ್ಯತೆ
ಸಂಡಾಯ್ ವಿಮಾನ ನಿಲ್ದಾಣ ಜಲಾವೃತ
ಕಟ್ಟಡದ ಮೇಲೆ ನಿಂತು ರಕ್ಷಣೆಗಾಗಿ ಮೊರೆ
ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಪ್ರಾಣ ಉಳಿಸಿಕೊಳ್ಳಲು ಜನರ ಪರದಾಟ
ದೂರವಾಣಿ, ಇಂಟರ್ನೆಟ್ ಸಂಪರ್ಕ್ ಬಂದ್
ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್
ಮೀನುಗಾರಿಕೆಗೆ ತೆರಳಿದವರಿಗೆ ವಾಪಸಾಗಲು ಸೂಚನೆ
ಮತ್ತಷ್ಟು ಸುನಾಮಿ ಆರ್ಭಟ ಸಂಭವ....
ಇನ್ನು 30 ನಿಮಿಷಗಳಲ್ಲಿ ತೈವಾನ್‌ಗೆ ಸುನಾಮಿ
ಇಂಡೋನೇಷ್ಯಾಕ್ಕೆ 4.30ಕ್ಕೆ ಸುನಾಮಿ
ಸಂಜೆ 6 ಗಂಟೆಗೆ ಹವಾಯಿ ದ್ವೀಪ ಪ್ರದೇಶಕ್ಕೆ
ನ್ಯೂಜಿಲ್ಯಾಂಡ್‌ಗೆ ರಾತ್ರಿ 10-50ಕ್ಕೆ
ಆಸ್ಟ್ರೇಲಿಯಾಕ್ಕೆ ರಾತ್ರಿ 11-15ಕ್ಕೆ
ಅಣು ಸ್ಥಾವರಕ್ಕೆ ಬೆಂಕಿ:
ಈಶಾನ್ಯ ಜಪಾನ್‌ನಲ್ಲಿರುವ ಒನಗವಾ ಎಂಬಲ್ಲಿನ ಅಣು ಸ್ಥಾವರಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಇದೀಗ ಅಣು ಇಂಧನ ಸೋರಿಕೆ ಭೀತಿ ಎದುರಿಸುವಂತಾಗಿದೆ. ಆ ನಿಟ್ಟಿನಲ್ಲಿ ಜಪಾನ್‌ನಲ್ಲಿ ಪರಮಾಣು ತುರ್ತುಪರಿಸ್ಥಿತಿ ಘೋಷಿಸಲಾಗಿದೆ