Keblinger

Keblinger

ರೂಪದರ್ಶಿ ಸ್ತನ ಕಚ್ಚಿದ ಹಾವು ತಕ್ಷಣ ಸಾವು

| Tuesday, March 15, 2011
ಟೆಲ್ ಅವೀವ್, ಮಾ.15: ಹಾವು ಕಡಿತದಿಂದ ಮನುಷ್ಯರು ಸಾಯುವುದು ಸಾಮಾನ್ಯ ಸುದ್ದಿ. ಆದರೆ, ಮನುಷ್ಯರನ್ನು ಕಡಿದ ಹಾವು ಮೃತಪಟ್ಟರೆ, ಅದು ವಿಚಿತ್ರ ಸುದ್ದಿ. ಇಲ್ಲೊಬ್ಬಳು ಆಧುನಿಕ ವಿಷಕನ್ಯೆ ಇದ್ದಾಳೆ. ಆ ಮಹಿಳೆಯೊಬ್ಬಳ ಸ್ತನಕ್ಕೆ ಕಚ್ಚಿದ ಹಾವು ಪ್ರಾಣ ಬಿಟ್ಟಿದೆ. ಹಾವಿನ ಸಾವಿಗೆ ಕಾರಣ ಆಕೆಯದ್ದು ನೈಸರ್ಗಿಕ ಸ್ತನವಲ್ಲ, ಬದಲಿಗೆ ಸಿಲಿಕಾನ್ ಸ್ತನ.

ಒರಿಟ್ ಫಾಕ್ಸ್ ಎಂಬ ಇಸ್ರೇಲಿ ಮಾಡೆಲ್ ಶಸ್ತ್ರಚಿಕಿತ್ಸೆ ಮೂಲಕ ಸಿಲಿಕಾನ್ ತುಂಬಿಸಿಕೊಂಡಿದ್ದ ಸ್ತನವನ್ನು ಮಾಡಿಸಿಕೊಂಡು ತಿದ್ದು ತೀಡಿಸಿಕೊಂಡು ಘನಸ್ತನೆಯಾಗಿ ಮೆರೆಯುತ್ತಿದ್ದಳು. ಇಂದು ಆಕೆ ಸ್ತನ ಒಂದು ಶೀತ ಜೀವಿಯ ಪ್ರಾಣವಲ್ಲ ತೆಗೆದಿದೆ. ಆದರೆ, ಆಕೆ ಜೀವಕ್ಕೆ ಆಪಾಯ ಸಂಭವಿಸಿಲ್ಲ.


ಹಲವಾರು ಬಾರಿ ‘ಎದೆಗಾರಿಕೆ’ ಹೆಚ್ಚಿಸಿಕೊಂಡಿದ್ದ ಒರಿಟ್ ಫಾಕ್ಸ್ ರನ್ನು ರೇಡಿಯೋ ಚಾನಲ್ಲೊಂದು ಕಾರ್ಯಕ್ರಮದ ಪ್ರಚಾರಕ್ಕೆಂದು ಫೋಟೋಶೂಟ್ ಗೆ ಕರೆಸಿಕೊಂಡಿತ್ತು. ಫೋಟೋಶೂಟಿಗಾಗಿ ಪಳಗಿದ ಹೆಬ್ಬಾವು (boa constrictor) ವನ್ನು ತರಲಾಗಿತ್ತು. ಆರಂಭದಲ್ಲಿ ಹೆಬ್ಬಾವು ಸರಿಯಾಗಿಯೇ ಈಕೆಗೆ ಸಹಕರಿಸಿದೆ. ಈಕೆ ಕೈಯಲ್ಲಿ ಹಾವನ್ನು ಹಿಡಿದುಕೊಂಡು ತನ್ನ ತುಟಿಗಳ ಹತ್ತಿರ ತೆಗೆದುಕೊಂಡು ಚುಂಬಿಸಿದಾಗಲೂ ಮಾಡಿರಲಿಲ್ಲ.

ಮನುಷ್ಯ ಹಾವಿಗಿಂತ ವಿಷ: ಆದರೆ, ಚುಂಬನದ ನಂತರ ಹಾವಿಗೆ ಏನಾಯಿತೋ ಗೊತ್ತಿಲ್ಲ. ವಿಪರೀತವಾಗಿ ಆಡಲಾರಂಭಿಸಿ, ಏಕಾಏಕಿ ಆಕೆಯ ಎಡ ಸ್ತನವನ್ನು ಕಚ್ಚಿ ಹಿಡಿದಿದೆ. ಹಾವಿನ ಮಾಲೀಕ ಬೆದರಿಸಿದರೂ ಹಾವೂ ಮಾತ್ರ ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಸುಮಾರು ಅರ್ಧ ನಿಮಿಷದಷ್ಟು ಹೊತ್ತು ಕಚ್ಚಿ ಹಿಡಿದಿತು. ಕೊನೆಗೆ ಪ್ರಯಾಸಪಟ್ಟು ಹಾವಿನ ಕಡಿತದಿಂದ ಬಿಡಿಸಲಾಯಿತು.

ಹಾವಿನಿಂದ ಕಚ್ಚಿಸಿಕೊಂಡ ಫಾಕ್ಸ್ ಗೆ ಹೆಚ್ಚಾಗಿ ಘಾಸಿಯಾಗಿಲ್ಲ. ಪ್ರಥಮ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಉತ್ತರ ಜೆರುಸುಲೇಂನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ, ಆಕೆಯ ಸ್ತನವನ್ನು ಕಚ್ಚಿದ್ದ ಹಾವು ಕೆಲವೇ ಕ್ಷಣದಲ್ಲಿ ಸಿಲಿಕಾನ್ ವಿಷದಿಂದ ಮೃತಪಟ್ಟಿದೆ. ಸ್ತನ ಗಾತ್ರ ಹೆಚ್ಚಿಸಿಕೊಂಡು ಮೆರೆಯುತ್ತಿದ್ದ ರೂಪದರ್ಶಿಯ ಎದೆಗೆ ಒಂದು ಬಲಿ ಬಿದ್ದಿದೆ.

ಅಬ್ಬಾಬ್ಬಾ ಜಪಾನ್‌ ಸುನಾಮಿ

| Saturday, March 12, 2011


ಸುನಾಮಿ ತಂದ ಅವಾಂತರ ಏನು:

13 ಅಡಿ ಎತ್ತರದ ರಕ್ಕಸ ಗಾತ್ರದ ಅಲೆಗಳು
ನೀರಿನಲ್ಲಿ ಕೊಚ್ಚಿ ಹೋದ ಕಾರು, ಕಟ್ಟಡಗಳು  
ಪರಮಾಣು ಘಟಕ, ವಿಮಾನ ನಿಲ್ದಾಣ ಬಂದ್
ರಷ್ಯಾ,ನ್ಯೂಜಿಲ್ಯಾಂಡ್, ಮೆಕ್ಸಿಕೋ, ಚಿಲಿ, ಪೆರು, ತೈವಾನ್, ಫಿಲಿಫೈನ್, ಇಂಡೋನೇಷ್ಯಾ, ಆಸ್ಟ್ರೇಲಿಯಾಗಳಲ್ಲೂ ಸುನಾಮಿ ಎಚ್ಚರಿಕೆ
ಹೊತ್ತಿ ಉರಿಯುತ್ತಿರುವ ತೈಲ ಘಟಕಗಳು
ಜನವಸತಿ ಪ್ರದೇಶಕ್ಕೆ ನುಗ್ಗಿದ ನೀರು
ರಾಜಧಾನಿ ಟೋಕಿಯೋದಲ್ಲಿ ಕಂಪನದ ಅನುಭವ
ರಕ್ಷಣೆಗಾಗಿ 900 ಜನರ ತಂಡ. 
ಜಪಾನ್ ಕಾಲಮಾನ ಮಧ್ಯಾಹ್ನ 2.46ಕ್ಕೆ ಘಟನೆ ಸಂಭವಿಸಿದೆ 
25 ಜನರ ಸಾವು, ಈ ಸಂಖ್ಯೆ ಮತ್ತಷ್ಟು ಹೆಚ್ಚಳ ಸಾಧ್ಯತೆ
ಸಂಡಾಯ್ ವಿಮಾನ ನಿಲ್ದಾಣ ಜಲಾವೃತ
ಕಟ್ಟಡದ ಮೇಲೆ ನಿಂತು ರಕ್ಷಣೆಗಾಗಿ ಮೊರೆ
ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಪ್ರಾಣ ಉಳಿಸಿಕೊಳ್ಳಲು ಜನರ ಪರದಾಟ
ದೂರವಾಣಿ, ಇಂಟರ್ನೆಟ್ ಸಂಪರ್ಕ್ ಬಂದ್
ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್
ಮೀನುಗಾರಿಕೆಗೆ ತೆರಳಿದವರಿಗೆ ವಾಪಸಾಗಲು ಸೂಚನೆ

ಮತ್ತಷ್ಟು ಸುನಾಮಿ ಆರ್ಭಟ ಸಂಭವ....
ಇನ್ನು 30 ನಿಮಿಷಗಳಲ್ಲಿ ತೈವಾನ್‌ಗೆ ಸುನಾಮಿ
ಇಂಡೋನೇಷ್ಯಾಕ್ಕೆ 4.30ಕ್ಕೆ ಸುನಾಮಿ
ಸಂಜೆ 6 ಗಂಟೆಗೆ ಹವಾಯಿ ದ್ವೀಪ ಪ್ರದೇಶಕ್ಕೆ
ನ್ಯೂಜಿಲ್ಯಾಂಡ್‌ಗೆ ರಾತ್ರಿ 10-50ಕ್ಕೆ
ಆಸ್ಟ್ರೇಲಿಯಾಕ್ಕೆ ರಾತ್ರಿ 11-15ಕ್ಕೆ

ಅಣು ಸ್ಥಾವರಕ್ಕೆ ಬೆಂಕಿ:
ಈಶಾನ್ಯ ಜಪಾನ್‌ನಲ್ಲಿರುವ ಒನಗವಾ ಎಂಬಲ್ಲಿನ ಅಣು ಸ್ಥಾವರಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಇದೀಗ ಅಣು ಇಂಧನ ಸೋರಿಕೆ ಭೀತಿ ಎದುರಿಸುವಂತಾಗಿದೆ. ಆ ನಿಟ್ಟಿನಲ್ಲಿ ಜಪಾನ್‌ನಲ್ಲಿ ಪರಮಾಣು ತುರ್ತುಪರಿಸ್ಥಿತಿ ಘೋಷಿಸಲಾಗಿದೆ

ತ್ಸುನಾಮಿಗೆ ತತ್ತರಿಸಿದ ಇಂಡೋನೇಷ್ಯಾ: 272 ಬಲಿ

|

ಇಂಡೋನೇಷ್ಯಾದ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ ಉಕ್ಕಿಹರಿದ ತ್ಸುನಾಮಿ ಅಲೆಗೆ ಸುಮಾರು 272 ಮಂದಿ ಬಲಿಯಾಗಿದ್ದು, ನೂರಾರು ಜನರು ಕಣ್ಮರೆಯಾಗಿದ್ದಾರೆ. ತ್ಸುನಾಮಿ ಅಲೆಯಿಂದ ದ್ವೀಪ ಪ್ರದೇಶದ ಗ್ರಾಮಗಳು ತತ್ತರಿಸಿಹೋಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಮೆಂಟಾವೈ ದ್ವೀಪಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿತ್ತು. ನಂತರ ಕರಾವಳಿಯಲ್ಲಿ ಸುಮಾರು ಮೂರು ಮೀಟರ್ (10 ಅಡಿ) ಎತ್ತರದ ರಕ್ಕಸಗಾತ್ರದ ಅಲೆಗಳು ಎದ್ದ ಪರಿಣಾಮ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಅಧಿಕಾರಿಗಳು ವಿವರಿಸಿದ್ದಾರೆ.

ತ್ಸುನಾಮಿ ಅಬ್ಬರಕ್ಕೆ ಸುಮಾರು 272 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆಂದು ಪೂರ್ವ ಸುಮಾತ್ರಾ ಆಪತ್ತು ನಿರ್ವಹಣಾ ಮುಖ್ಯಸ್ಥ ಹಾರ್ಮೆನ್‌ಶಾಯ್ ತಿಳಿಸಿದ್ದಾರೆ
|

ಉತ್ತರ ಟೋಕಿಯೊದ ಫುಕುಶಿಮಾದಲ್ಲಿನ ನ್ಯೂಕ್ಲಿಯರ್ ಘಟಕವೊಂದರಲ್ಲಿ ಶನಿವಾರ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಅಣು ವಿಕಿರಣಗಳು ಹೊರಸೂಸುತ್ತಿರುವುದಾಗಿ ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಭವಿಸಿದ 8.9ರಷ್ಟು ಪ್ರಮಾಣದ ಭಾರಿ ಭೂಕಂಪಕ್ಕೆ ಅಣು ರಿಯಾಕ್ಟರ್ ಘಟಕದ ಮೇಲ್ಛಾವಣಿ ಕುಸಿದಿದ್ದು, ಆದರೆ ಅಣು ವಿಕಿರಣ ಸೋರಿಕೆಯ ಹೆದರಿಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಏತನ್ಮಧ್ಯೆ ಅಣು ರಿಯಾಕ್ಟರ್ ಘಟಕ ಸ್ಫೋಟಗೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಅಣು ಸ್ಥಾವರದಲ್ಲಿನ ಘಟನೆ ಕುರಿತಂತೆ ಹಾಗೂ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸುತ್ತಿದ್ದೇವೆ. ನಂತರ ನಾವು ಆ ವಿಷಯವನ್ನು ಸಾರ್ವಜನಿಕವಾಗಿ ಪ್ರಕಟಿಸುವುದಾಗಿ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಯೂಕಿಯೋ ಎಡಾನೋ ತಿಳಿಸಿದ್ದಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ನ್ಯೂಕ್ಲಿಯರ್ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಜಪಾನ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಹತ್ತು ಮೀಟರ್ ಎತ್ತರ ರಕ್ಕಸ ಅಲೆಗಳ ಸುನಾಮಿಯಿಂದಾಗಿ ಹಲವು ಹಳ್ಳಿಗಳು ಕೊಚ್ಚಿ ಹೋಗಿವೆ. ಘಟನೆಯಲ್ಲಿ ಸುಮಾರು 1,300ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಶುಕ್ರವಾರ ಸಂಭವಿಸಿದ 8.8 ತೀವ್ರತೆಯ ಭಾರೀ ಭೂಕಂಪದಿಂದಾಗಿ ಕರಾವಳಿ ಪ್ರದೇಶದಲ್ಲಿ ಎದ್ದ ರಕ್ಕಸಗಾತ್ರದ ಸುನಾಮಿ ಅಲೆಗಳಿಗೆ ಸಾವಿರಾರು ಕಟ್ಟಡಗಳು ಜಲಸಮಾಧಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಭಾರೀ ಸುನಾಮಿಯಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಸಾವು-ನೋವಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸುಮಾರು 20 ಅಡಿ ಎತ್ತರದ ಅಲೆಗಳಿಂದಾಗಿ ಸಾವಿರಾರು ಕಟ್ಟಡಗಳು ಕೊಚ್ಚಿ ಹೋಗುತ್ತಿರುವ ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿವೆ.
ಉತ್ತರ ಜಪಾನ್‌ನ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ 8.8 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ಸಮುದ್ರದಾಳದಲ್ಲಿ ಎದ್ದ ಭಾರೀ ಸುನಾಮಿ ಹೊಡೆತಕ್ಕೆ ಕಟ್ಟಡ, ಕಾರು, ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ದೇಶದ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ರೈಲು, ವಿಮಾನ ಸೇವೆ ಸ್ಥಗಿತಗೊಂಡಿದೆ. ಕಳೆದ 15 ವರ್ಷಗಳಲ್ಲಿನ ಅತ್ಯಂತ ದೊಡ್ಡ ಭೂಕಂಪ ಇದು ಎಂದು ಭೂಗರ್ಭಶಾಸ್ತ್ರ ತಜ್ಞರು ತಿಳಿಸಿದ್ದಾರೆ. ಉತ್ತರ-ಕರಾವಳಿ ಟೋಕಿಯೋದಿಂದ 250 ಕಿಲೋ ಮೀಟರ್ ದೂರದ ಕರಾವಳಿ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದೆ.
ಇಂಡೋನೇಷಿಯಾ, ಹವಾಯ್ ದ್ವೀಪ, ಫಿಲಿಫೈನ್ಸ್‌ನಲ್ಲಿಯೂ ಸುನಾಮಿ ಭೀತಿ ಎದುರಾಗಿದ್ದು, ರಷ್ಯಾದಲ್ಲಿಯೂ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿದೆ. ಜಪಾನ್ ದೇಶದ ಐದು ಅಣುಸ್ಥಾವರವನ್ನು ಬಂದ್ ಮಾಡಲಾಗಿದೆ. ತೈಲ ಘಟಕಗಳು ಹೊತ್ತಿ ಉರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಪಾನ್ ಸುನಾಮಿ 11 03 2011

|


ನಿನ್ನೆಯ ದಿನ ಜಪಾನ್‌ನಲ್ಲಿ ಸಂಭವಿಸಿದ ಸುನಾಮಿ ಭಾರತಕ್ಕೆ ಅಪ್ಪಳಿಸಿದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಹೀಗೊಂದು ಅವಲೋಕನಕ್ಕಿಳಿದರೆ, ಭಾರತದ ಜನಸಂಖ್ಯೆ, ತಂತ್ರಜ್ಞಾನ, ಮೂಲಭೂತ ಸೌಕರ್ಯ, ಪ್ರಕೃತಿ ವಿಕೋಪದ ಕುರಿತ ಅರಿವು, ನಮ್ಮ ಪರಿಸ್ಥಿತಿ, ಅದಕ್ಕೂ ಹೆಚ್ಚಾಗಿ ನಾವು ಕಾನೂನುಗಳನ್ನು ಪಾಲಿಸುವ ರೀತಿಯನ್ನು ಗಂಭೀರವಾಗಿ ಪರಿಗಣಿಸಿದರೆ, ಲಕ್ಷಾಂತರ ಮಂದಿಯ ಆಹುತಿ ನಡೆಯುತ್ತಿತ್ತು ಎನ್ನುವುದು ನಿರ್ವಿವಾದವಾಗಿ ಸಿಗುವ ಸುಲಭ ಉತ್ತರ!

ಅದೆಷ್ಟೇ ಬಾಂಬ್ ದಾಳಿ, ಪ್ರಕೃತಿ ವಿಕೋಪಗಳು ಎದುರಾದರೂ ಏನೂ ಆಗದಂತೆ ಸುಧಾರಿಸಿಕೊಂಡು ನಡೆದುಕೊಂಡು ಬಂದಿರುವ, ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಉಳಿಸಿಕೊಂಡಿರುವ ದೇಶ ಜಪಾನ್. ಅಂತಹ ದೇಶವೇ ನಿನ್ನೆಯ ದಿನ ಸುನಾಮಿಯ ರೌದ್ರಾವತಾರಕ್ಕೆ ತತ್ತರಿಸಿದೆ. ಆದರೆ, ಹೆಚ್ಚಿನ ಪ್ರಾಣಾಪಾಯಗಳು ಆಗದಂತೆ ಅದು ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೆಲವೇ ಸಾವಿರಕ್ಕೆ ಸಾವಿನ ಸಂಖ್ಯೆ ಸೀಮಿತಗೊಂಡಿದೆ. ಇದಕ್ಕೆ ಕಾರಣಗಳು ಹಲವು.

ಮೊದಲನೆಯದಾಗಿ ಆ ದೇಶದಲ್ಲಿನ ಜನಸಂಖ್ಯೆ; ಜಪಾನಿಗರ ಸಾಕ್ಷರತೆಯ ಪ್ರಮಾಣ; ತಂತ್ರಜ್ಞಾನ ಮತ್ತು ಅದರ ಬಗ್ಗೆ ಇರುವ ಅರಿವು; ಸರಕಾರದ ಕಾನೂನುಗಳನ್ನು ಪಾಲಿಸುವ, ಆದೇಶಗಳನ್ನು ಗೌರವಿಸುವ ರೀತಿ- ಇವೆಲ್ಲವೂ ಸಾವಿನ ಸಂಖ್ಯೆಯನ್ನು ಕೆಲವೇ ಸಾವಿರಗಳಿಗೆ ಸೀಮಿತಗೊಳಿಸುವಲ್ಲಿ ಕಾರಣಗಳಾಗಿವೆ.
ಗಂಟೆಯೊಳಗೆ ವಿಮಾನ ನಿಲ್ದಾಣ ಓಪನ್...
ಸೆಂಡಾಯ್ ವಿಮಾನ ನಿಲ್ದಾಣಕ್ಕೆ ಸುನಾಮಿ ನುಗ್ಗಿ ನಡೆದ ಆವಾಂತರಗಳ ಚಿತ್ರಗಳನ್ನು ಎಲ್ಲರೂ ನೋಡಿರುತ್ತೀರಿ. ವಿಮಾನಗಳು, ಕಾರುಗಳು, ಅವಶೇಷಗಳೆಡೆಯಲ್ಲಿ ಬಿದ್ದಿರುವುದನ್ನು ಗಮನಿಸಿರುತ್ತೀರಿ. ಇದೆಲ್ಲ ನಡೆಯುತ್ತಿದ್ದಂತೆ ಜಪಾನ್ ಕರಾವಳಿಯ ಬಹುತೇಕ ವಿಮಾನ ನಿಲ್ದಾಣಗಳು, ಬಂದರುಗಳು, ರೈಲ್ವೇ ನಿಲ್ದಾಣಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು. ಕೆಲವೇ ಕ್ಷಣಗಳೊಳಗೆ ಅವುಗಳಲ್ಲಿ ಬಹುತೇಕವಾದುವು ಕೊಚ್ಚಿ ಹೋಗಿದ್ದವು.
ಅಚ್ಚರಿಯ ವಿಚಾರವೆಂದರೆ, ಸುನಾಮಿ ಬಂದು ಹೋದ ಗಂಟೆಗಳೊಳಗೆ ಹಾನಿಗೊಂಡ ಹಲವು ವಿಮಾನ ನಿಲ್ದಾಣಗಳು ಮರು ಕಾರ್ಯಾಚರಣೆ ಆರಂಭಿಸಿರುವುದು. ಇದನ್ನು ಸ್ವತಃ ಜಪಾನ್ ಟಿವಿ ಚಾನೆಲ್‌ಗಳು ಖಚಿತಪಡಿಸಿವೆ.

ಪರಮಾಣು ಅವಘಡವೂ ತಪ್ಪಿ ಹೋಯಿತು...
ಭೂಕಂಪ ಮತ್ತು ಸುನಾಮಿಯಿಂದಾಗಿ ಜಪಾನ್‌ ಕರಾವಳಿಯಲ್ಲಿನ ಐದು ಪರಮಾಣು ಸ್ಥಾವರಗಳು ಭಾರೀ ಅಪಾಯಕ್ಕೆ ಸಿಲುಕಿದ್ದವು. ಅವುಗಳಲ್ಲಿ ಎರಡು ಸ್ಥಾವರಗಳ ಸುರಕ್ಷತೆಯ ಭರವಸೆಯಂತೂ ಸಂಪೂರ್ಣವಾಗಿ ಕ್ಷೀಣಿಸಿತ್ತು.

ಆ ಸ್ಥಾವರಗಳಲ್ಲಿನ ಶೀತಲ ಘಟಕವು ವಿಫಲಗೊಂಡಿತ್ತು. ಕೆಲವು ಘಟಕಗಳಲ್ಲಿ ಬೆಂಕಿಯೂ ಹತ್ತಿಕೊಂಡಿತ್ತು. ಇದು ಇದೇ ರೀತಿ ಮುಂದುವರಿಯುತ್ತಿದ್ದರೆ, ವಿಕಿರಣ ಸೋರಿಕೆ, ಪರಮಾಣು ಅವಘಡವೇ ನಡೆದು ಹೋಗುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಕಾರ ಪಡೆದುಕೊಂಡ ಜಪಾನ್, ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಬಹುತೇಕ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.
ಇತ್ತೀಚಿನ ಮಾಹಿತಿಗಳ ಪ್ರಕಾರ ಪರಮಾಣು ಘಟಕವೊಂದರಲ್ಲಿ ಸ್ಫೋಟ ಸಂಭವಿಸಿದೆ. ಇದು ಇನ್ನೂ ಖಚಿತವಾಗಿಲ್ಲ.
ಜನಸಂಖ್ಯೆಯದ್ದೂ ಪ್ರಮುಖ ಪಾತ್ರ...
3,287,263 ಚದರ ಕಿಲೋ ಮೀಟರ್ ವಿಸ್ತೀರ್ಣದ ಭೂ ಪ್ರದೇಶ ಹೊಂದಿರುವ ದೇಶ ಭಾರತ. ಕೇವಲ 377,873 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ದೇಶ ಜಪಾನ್. ನಮ್ಮ ದೇಶದ ಜನಸಂಖ್ಯೆ 120 ಕೋಟಿ, ಜಪಾನ್ ಜನಸಂಖ್ಯೆ ಕೇವಲ 13 ಕೋಟಿ.
ಜಪಾನ್ ಪ್ರಜೆಯೊಬ್ಬನ ಸರಾಸರಿ ತಲಾ ವಾರ್ಷಿಕ ಆದಾಯವು ಭಾರತೀಯನಿಗಿಂತ ಹತ್ತಕ್ಕೂ ಹೆಚ್ಚು ಪಟ್ಟು ಅಧಿಕವಾಗಿದೆ. ಜಪಾನ್‌ನ ಸಾಕ್ಷರತೆಯ ಪ್ರಮಾಣ ಶೇ.99ಕ್ಕಿಂತಲೂ ಹೆಚ್ಚು ಇದ್ದರೆ, ಭಾರತದ ಸಾಕ್ಷರತೆಯ ಪ್ರಮಾಣ ಶೇ.70ಕ್ಕಿಂತಲೂ ಕಡಿಮೆ.
ಭಾರತದ ಸುನಾಮಿ ಎಚ್ಚರಿಕೆ ಘಟಕ ಹೇಗಿದೆ? 
ಆರೂವರೆ ವರ್ಷಗಳ ಹಿಂದಿನ ಮಾತಾದರೆ, ಭಾರತದಲ್ಲಿ ಸುನಾಮಿ ಅಥವಾ ಭೂಕಂಪಗಳ ಕುರಿತು ಮುನ್ನೆಚ್ಚೆರಿಕೆ ನೀಡುವ ಅಂತಹ ಘಟಕಗಳು ಅಥವಾ ತಂತ್ರಜ್ಞಾನದ ಕೊರತೆಯಿತ್ತು. ಸುನಾಮಿ ಎಂದರೇನೆಂದೇ ತಿಳಿಯದಿರುವ ಮಟ್ಟಿಗೆ ನಾವಿದ್ದೆವು. ಆದರೆ ಈಗ ಹಾಗಲ್ಲ. ಭಾರತ ಬಿಡಿ, ಪಕ್ಕದ ರಾಷ್ಟ್ರಗಳಿಗೂ ಮಾಹಿತಿ ನೀಡುವಷ್ಟು ತಂತ್ರಜ್ಞಾನ ಭಾರತದಲ್ಲಿದೆ.

ಹೈದರಾಬಾದಿನ ಇಂಡಿಯನ್ ನ್ಯಾಷನಲ್ ಸೆಂಟರಿನಲ್ಲಿ ಸುನಾಮಿ ಮುನ್ನೆಚ್ಚೆರಿಕಾ ಕೇಂದ್ರವಿದೆ. ಕಳೆದ ಮೂರು ವರ್ಷಗಳಲ್ಲಿ 25ರಿಂದ 30 ಪ್ರಮುಖ ಭೂಕಂಪಗಳ ಮಾಹಿತಿಗಳನ್ನು ಈ ಕೇಂದ್ರ ನೀಡಿದೆ. ಆ ನಿಟ್ಟಿನಲ್ಲಿ ಭಾರತವು ಹಿಂದೆ ಬಿದ್ದಿಲ್ಲ.

ಜಪಾನ್‌ನಲ್ಲಿ ಸಂಭವಿಸಿದ 8.9 ತೀವ್ರತೆಯ ಭೂಕಂಪದಿಂದ ಭಾರತಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಈ ಕೇಂದ್ರ ಸ್ಪಷ್ಟವಾಗಿ ಹೇಳಿದೆ. ನಾವು ಇದುವರೆಗೆ ಶೇ.100ರಷ್ಟು ಸುರಕ್ಷಿತರು. ಇದುವರೆಗೆ ಯಾವುದೇ ಎಚ್ಚರಿಕೆಯನ್ನು ನಾವು ರವಾನಿಸಿಲ್ಲ ಎಂದು ಇದರ ನಿರ್ದೇಶಕ ಸತೀಶ್ ಶೆಣೈ ಹೇಳಿದ್ದಾರೆ.

ಕಾನೂನುಗಳು ಕಠಿಣ-ಪಾಲನೆಯಲ್ಲೂ ಶಿಸ್ತು...
ಜಪಾನ್ ಕಟ್ಟಡಗಳನ್ನು ಕಟ್ಟುವಾಗ ನಿರ್ದಿಷ್ಟ ನಿಯಮಗಳನ್ನು ಅನುಸರಿಸಬೇಕು ಎಂದು ಕಾನೂನು ರೂಪಿಸಿದೆ. ಭಾರತದಲ್ಲಿ ಕಾನೂನು ಮತ್ತು ಅದು ಜಾರಿಗೆ ಬರುವಲ್ಲಿ ಇರುವಂತಹಾ ವ್ಯತ್ಯಾಸ ಅಲ್ಲಿಲ್ಲ. ಭಾಗಶಃ ಮಂದಿ ಸರಕಾರವು ರೂಪಿಸುವ ನೀತಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಸಾಕ್ಷರರಾಗಿರುವುದರಿಂದ ಅವರಿಗೆ ನಿಯಮಗಳ ಹಿಂದಿನ ಉದ್ದೇಶವೂ ಸ್ಪಷ್ಟವಾಗಿರುತ್ತದೆ.

ಬಹುಮಹಡಿ ಕಟ್ಟಡಗಳ ಸುತ್ತ ಅಗ್ನಿಶಾಮಕ ದಳ ವಾಹನ ತೆರಳುವಷ್ಟು ಜಾಗ ಬಿಡಬೇಕೇಂಬ ಕಾನೂನು ಭಾರತದ ಹಲವು ಮಹಾನಗರ ಪಾಲಿಕೆಗಳಲ್ಲಿದೆ. ಆದರೆ ಅದನ್ನು ಪಾಲಿಸುವ ಮಂದಿ ಎಲ್ಲಿದ್ದಾರೆ? ನಮ್ಮ ಬಿಲ್ಡರುಗಳು ಎಲ್ಲಿ ಸರಕಾರಿ ನೀತಿಗಳನ್ನು ಅನುಸರಿಸುತ್ತಾರೆ?
ಆದರೆ ಭೂಕಂಪಗಳ ಕೇಂದ್ರವಾಗಿರುವ, ಇಡೀ ಜಗತ್ತಿನ ಒಟ್ಟು ಭೂಕಂಪಗಳಲ್ಲಿ ಶೇ.20ರಷ್ಟನ್ನು ಎದುರಿಸುವ ಜಪಾನ್ ಹಾಗಲ್ಲ. ಅದು ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸೂಕ್ತವಾದ ಕಟ್ಟಡ ವಿನ್ಯಾಸಗಳನ್ನು ರೂಪಿಸಿ, ಪ್ರಜೆಗಳು ಅದನ್ನೇ ಪಾಲಿಸಬೇಕು ಎಂದು ಕಠಿಣ ನೀತಿಗಳನ್ನು ರೂಪಿಸಿದೆ ಮತ್ತು ಅದನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಇದು ಕೂಡ ಸಾವಿನ ಸಂಖ್ಯೆ ಹೆಚ್ಚಾಗದಿರಲು ಒಂದು ಕಾರಣ.
ಭೂಕಂಪ ಮತ್ತು ಸುನಾಮಿಗಳು ಬಂದರೆ, ಅದರಿಂದ ಪಾರಾಗುವಂತಹ ಕಟ್ಟಡಗಳನ್ನು ನಿರ್ಮಿಸುವ ತಂತ್ರಜ್ಞಾನಕ್ಕಾಗಿ ಜಪಾನ್ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯಯಿಸಿದೆ. ಅದೇ ಕಾರಣದಿಂದ ಜಪಾನ್ ಹೊರತುಪಡಿಸಿ ಬೇರೆ ಯಾವುದೇ ದೇಶವಾಗಿದ್ದರೂ, 8.9 ತೀವ್ರತೆಯ ಭೂಕಂಪದಿಂದ ಉಳಿಯುವುದು ಸಾಧ್ಯವಿರಲಿಲ್ಲ. ಸುನಾಮಿ ಆ ದೇಶಕ್ಕೆ ದೊಡ್ಡ ಆಘಾತ ಎನ್ನುವುದು ನಿಜವಾಗಿದ್ದರೂ, ಹಿರೋಷಿಮಾ-ನಾಗಸಾಕಿಗೆ ಬಿದ್ದ ಅಣು ಬಾಂಬ್ ದಾಳಿಯಿಂದಲೇ ಚೇತರಿಸಿಕೊಂಡಿದ್ದ ಜಪಾನ್‌ಗೆ, ಇದು ದಶಕಗಳಷ್ಟು ಹಿನ್ನಡೆ ಒದಗಿಸಿತು ಎಂದೇನೂ ಭಾವಿಸಬೇಕಾಗಿಲ್ಲ.ನಾ ಫಿಲಿಪೈನ್ಸ್‌ನಿಂದ ಹವಾಯ್ ದ್ವೀಪಗಳವರೆಗೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ. 2007ರಿಂದ ನಾವು ಜಗತ್ತಿನ ಇತರ ಸುನಾಮಿ ಎಚ್ಚರಿಕಾ ಕೇಂದ್ರಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಶೈಲೇಶ್ ನಾಯ್ಕ್ ತಿಳಿಸಿದ್ದಾರೆ.ಆದರೆ ಇನ್ನೊಂದು ವರದಿಯ ಪ್ರಕಾರ, ಭಾರತದ ಸುನಾಮಿ ಎಚ್ಚರಿಕೆಯ ವ್ಯವಸ್ಥೆ ತೀರಾ ದುರ್ಬಲವಾಗಿದೆ. ಸಾಗರದಲ್ಲಿ ಸುನಾಮಿಯ ಕುರಿತು ಮುನ್ನೆಚ್ಚೆರಿಕೆ ನೀಡಲೆಂದು ಹಾಕಲಾಗಿರುವ ತೇಲುಬುರುಡೆಗಳು ಶಿಥಿಲಗೊಂಡಿವೆ. ಇದಕ್ಕೆ ಕಾರಣ ಮೀನುಗಾರರು. ತೇಲುಬುರುಡೆಗಳಲ್ಲಿನ ಲೋಹದ ಆಸೆಗಾಗಿ ಮೀನುಗಾರರು ಅದನ್ನು ಒಡೆಯುತ್ತಾರೆ ಎಂದು ಹೇಳಲಾಗುತ್ತಿದೆ.ಬಂಗಾಲ ಕೊಲ್ಲಿಯಲ್ಲಿ ಎರಡು ಹಾಗೂ ಅರೇಬಿಯನ್ ಸಮುದ್ರದಲ್ಲಿ ಒಂದು ಇಂತಹ ಎಚ್ಚರಿಕೆಯನ್ನು ನೀಡುವ ವ್ಯವಸ್ಥೆಗಳನ್ನು ಭಾರತ ಹೊಂದಿದೆ. ಇಲ್ಲಿ ತೇಲುಬುರುಡೆಗಳಿಗೆ ಸಿಗುವ ಸಂಕೇತಗಳು ನೇರವಾಗಿ ಕೃತಕ ಉಪಗ್ರಹಗಳಿಗೆ ರವಾನೆಯಾಗುತ್ತದೆ. ಅಲ್ಲಿಂದ ಎಚ್ಚರಿಕೆಯ ಸಂದೇಶಗಳು ಭೂಮಿಯ ಮೇಲಿನ ಎಚ್ಚರಿಕಾ ಕೇಂದ್ರಗಳಿಗೆ ಕಳುಹಿಸಲ್ಪಡುತ್ತದೆ.
ಇತರ ಕಾರಣಗಳು...
ಭಾರತದ ಮುನ್ನೆಚ್ಚೆರಿಕಾ ಘಟಕ ಅತ್ಯುತ್ತಮವಾಗಿದೆ ಎಂದು ಪರಿಗಣಿಸಿದರೂ, ಇತರ ಹಲವು ಕಾರಣಗಳು ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಬಹುದು.

ಸುನಾಮಿ ಮುನ್ನೆಚ್ಚೆರಿಕಾ ಕೇಂದ್ರವು ಕಟ್ಟೆಚ್ಚರ ರವಾನಿಸಿದ ನಂತರ ಕರಾವಳಿ ಪ್ರದೇಶದ ಜನರನ್ನು ಬೇರೆಡೆಗೆ ಸಾಗಿಸಬೇಕಾಗುತ್ತದೆ. ಆಗ ಪ್ರಮುಖವಾಗಿ ಗಣನೆಗೆ ಬರುವ ಅಂಶಗಳೆಂದರೆ, ಜನರನ್ನು ತೆರವುಗೊಳಿಸಲು ಸೂಕ್ತ ವ್ಯವಸ್ಥೆ, ಮೂಲಭೂತ ಸೌಕರ್ಯ ಮತ್ತು ಜನರಲ್ಲಿ ಪ್ರಕೃತಿ ವಿಕೋಪದ ಬಗ್ಗೆ ಇರುವ ಅರಿವು. ಈ ಪ್ರಮಾಣ ಜಪಾನ್‌ಗೆ ಹೋಲಿಸಿದರೆ, ಭಾರತದಲ್ಲಿ ತೀರಾ ಕಡಿಮೆ.

ಜಪಾನ್‌ನಲ್ಲಿ ಭೂಕಂಪ ಎನ್ನುವುದು ವಿಶೇಷವಲ್ಲ, ಆದರೂ ಅಲ್ಲಿನ ಜನ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಸರಕಾರವು ಜನರನ್ನು ತೆರವುಗೊಳಿಸುವ ಆದೇಶ ನೀಡಿದರೆ, ಅದನ್ನು ಚಾಚೂ ತಪ್ಪದೆ ಪಾಲಿಸುವ ಮಂದಿಯೇ ಅಧಿಕವಾಗಿರುತ್ತಾರೆ. ಇದೇ ಕಾರಣದಿಂದ ನಿನ್ನೆ ನಡೆದ ಭೂಕಂಪ-ಸುನಾಮಿ ಆ ದೇಶವನ್ನು ಭೀಕರವಾಗಿ ಜರ್ಜರಿತಗೊಳಿಸಿಲ್ಲ.

ಪ್ರಕೃತಿಯೆದುರು ನಾವೇನೂ ಅಲ್ಲ ಎಂಬುದನ್ನು ಈ ಪ್ರಳಯದಂತೆಯೇ ಕಂಡುಬರುವ ಸುನಾಮಿ ತೋರಿಸಿಕೊಟ್ಟಿದೆ. ಹೀಗಿರುವಾಗ ನಮ್ಮ ಉಡಾಫೆಯ ವರ್ತನೆಯೇ ನಮಗೆ ಮುಳುವಾಗದಂತೆ ನೋಡಿಕೊಳ್ಳುವ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಇರಬೇಕಾಗುತ್ತದೆ. ಅಲ್ಲವೇ?

| Tuesday, March 8, 2011
ಈ ಯುವತಿ ವಿಶ್ವದ ಅತೀ ಕಿರಿಯ ಅಜ್ಜಿ......
ನಂಬಿದ್ರೆ ನಂಬಿ...ಬಿಟ್ಟರೆ ಬಿಡಿ...ರುಮೇನಿಯಾದ 23ರ ಹರೆಯದ ಯುವತಿಯೊಬ್ಬಳು ವಿಶ್ವದ ಅತೀ ಕಿರಿಯ ಅಜ್ಜಿ ಎಂಬುದಾಗಿ ಹೇಳಿಕೊಂಡಿದ್ದಾಳೆಂದು ಮಾಧ್ಯಮದ ವರದಿಯೊಂದು ತಿಳಿಸಿದೆ!.

ತನ್ನ 12ನೇ ವಯಸ್ಸಿಗೆ ಮೊದಲ ಪುತ್ರಿ ಮಾರಿಯಾ ಜನಿಸಿರುವುದಾಗಿ ಹೇಳಿಕೊಂಡಿರುವ ಎರಡು ಮಕ್ಕಳ ತಾಯಿ ರಿಫ್ಕಾ ಸ್ಟಾನೆಸ್ಕೂ ತಾನು ಈಗ ಜಗತ್ತಿನ ಅತೀ ಕಿರಿಯ ಅಜ್ಜಿಯಾಗಿದ್ದೇನೆ ಎಂದಿದ್ದಾಳೆ. ತಾಯಿಯಂತೆ ಮಗಳು ಕೂಡ ಅಮ್ಮನ ಹಾದಿ ಹಿಡಿಯುವ ಮೂಲಕ ತನ್ನ ತಾಯಿಗೆ ಜಗತ್ತಿನ ಕಿರಿಯ ಅಜ್ಜಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗುವಂತೆ ಮಾಡಿದ್ದಾಳೆ.

ಇದೀಗ ಆಕೆಯ ಪುತ್ರಿ ಮಾರಿಯಾ (11) ಗಂಡು ಮಗುವಿಗೆ ಜನನ ನೀಡಿರುವುದಾಗಿ ದಿ ಸನ್ ಪತ್ರಿಕೆ ವರದಿ ಮಾಡಿದೆ. ರಿಫ್ಕಾ 11 ವರ್ಷದವಳಿದ್ದಾಗ ತನ್ನ ತಂದೆ ಬೇರೊಬ್ಬನ ಜತೆ ಮದುವೆ ಮಾಡುತ್ತಾನೆ ಎಂಬ ಭಯದಿಂದಾಗಿ ಮನೆಯಿಂದ ಓಡಿಹೋಗಿ ಆಭರಣ ಮಾರಾಟಗಾರನಾಗಿದ್ದ 13 ವರ್ಷದ ಐಯೊನೆಲ್ ಸ್ಟಾನೆಸ್ಕೂ ಎಂಬಾತನನ್ನು ವಿವಾಹವಾಗಿದ್ದಳು. ಒಂದು ವರ್ಷದ ನಂತರ ಮಗಳು ಮಾರಿಯಾ ಹಾಗೂ ತದನಂತರ ಪುತ್ರ ನಿಕೋಲೆ ಹುಟ್ಟಿರುವುದಾಗಿ ಆಕೆ ವಿವರಿಸಿದ್ದಾಳೆಂದು ವರದಿ ಹೇಳಿದೆ.

ಯುವ ತಾಯಿ ರಿಫ್ಕಾ ತನ್ನ ಮಗಳು ಶಾಲೆಗೆ ಹೋಗಲಿ ಎಂಬುದಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಳಂತೆ. ಆದರೆ ಮಾರಿಯಾ ಮದುವೆಯಾಗುವುದಾಗಿ ಹಠ ಹಿಡಿದ ಪರಿಣಾಮ ಹತ್ತನೇ ವಯಸ್ಸಿಗೆ ಆಕೆಗೆ ಮದುವೆ ಮಾಡಿಸಲಾಯಿತು. ಈಗ ಮಗಳಿಗೆ ಗಂಡು ಮಗು ಜನಿಸಿರುವುದಾಗಿ ಸನ್ ವರದಿ ವಿವರಿಸಿದೆ.

ಈ ಹಿಂದೆ ಬ್ರಿಟನ್‌ನ 26 ವರ್ಷದ ತರುಣಿಯೊಬ್ಬಳು ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಅಜ್ಜಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಳು. ಆಕೆಯ ಮಗಳು ತನ್ನ 12 ವಯಸ್ಸಿನಲ್ಲಿ ತಾಯಿಯಾಗಿದ್ದು ಈಕೆ 1999ರಲ್ಲಿ ಸುದ್ದಿಯಾಗಿದ್ದಳು. ಇದೀಗ 10 ವರ್ಷಗಳ ನಂತರ ಈ ದಾಖಲೆಯನ್ನು ರಿಫ್ಕಾ ಮುರಿದಿದ್ದಾಳೆ!
 

Copyright © 2010 ವಿದೇಶಿ ಸುದ್ದಿ