
ವಾಷಿಂಗ್ಟನ್, ಮೇ. 02 : ಜಗತ್ತಿನ ಶಾಂತಿಗೆ ಕಂಟಕಪ್ರಾಯವಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸಾವಿಗೀಡಾಗಿದ್ದಾನೆ. ಒಸಾಮಾ ಬಿನ್ ಲಾಡೆನ್ ನ ಮೃತದೇಹ ತಮ್ಮ ಸುಪರ್ದಿಯಲ್ಲಿದೆ ಎಂದು ಅಮೆರಿಕ ಹೇಳಿಕೆ ನೀಡಿದೆ.
2001ರ ಸೆಪ್ಟೆಂಬರ್ 11ರಂದು ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗಾನ್ ಮೇಲೆ ದಾಳಿ ಮಾಡಿಸಿ ಅಮೆರಿಕಾದ ಸಾರ್ವಭೌಮತ್ವಕ್ಕೆ ಭಾರೀ ಪೆಟ್ಟು ನೀಡಿದ್ದ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಅಮೆರಿಕಾದ ಸೇನೆಯಿಂದ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ಒಸಾಮಾ ಬಿನ್ ಲಾಡೆನ್ ಒಂದು ವೇಳೆ ಅಮೆರಿಕದವರ ಕೈಯಲ್ಲಿ ಹತನಾದರೆ ಅಥವಾ ಸಿಕ್ಕಿಬಿದ್ದರೆ ಅಣು ಬಾಂಬನ್ನು ಉಡಾಯಿಸಲಾಗುವುದು ಎಂದು ಅಲ್ ಖೈದಾ ಬೆದರಿಕೆ ಒಡ್ಡಿತ್ತು. ಯುರೋಪ್ ನಲ್ಲಿ ಅಣು ಬಾಂಬನ್ನು ಹುದುಗಿಡಲಾಗಿದ್ದು, ಒಸಾಮಾ ಸಿಕ್ಕಿಬಿದ್ದರೆ ಸರ್ವನಾಶವಾಗುವುದು ಖಂಡಿತ ಎಂಬ ಎಚ್ಚರಿಕೆ ನೀಡಿತ್ತು.
ಮುಯ್ಯಿಗೆ ಮುಯ್ಯಿ : ಸುದ್ದಿ ಹರಡುತ್ತಿದ್ದಂತೆಯೇ ಜನತೆ ಶ್ವೇತಭವನದತ್ತ ಧಾವಿಸಿ ಬರಲು ಆರಂಭಿಸಿದರು. ಅಮೆರಿಕಾದ ಕಾಲಮಾನ ಭಾನುವಾರ ರಾತ್ರಿ ಅಧ್ಯಕ್ಷ ಬರಾಕ್ ಒಬಾಮ ಪ್ರಪಂಚವನ್ನು ಉದ್ದೇಶಿಸಿ 15 ನಿವಿಷಗಳ ಭಾಷಣ ಮಾಡಿದರು. ಒಬಾಮ ಸಾವನ್ನು ಖಚಿತಪಡಿಸುವ ಮತ್ತು ಹತ್ತು ವರ್ಷಗಳಷ್ಟು ದೀರ್ಘ ಕಾಲ ಕಾದಿದ್ದು, ಹೊಂಚುಹಾಕಿ ಕೊನೆಗೂ ಅವನನ್ನು ಮುಗಿಸಿದ ವಿವರಗಳನ್ನು ಬಿಚ್ಚಿಟ್ಟರು. ಅವರ ಭಾಷಣದಲ್ಲಿ ಸೇಡು ತೀರಿಸಿಕೊಂಡ ಭಾವ ಮಡುಗಟ್ಟಿತ್ತು. ಧೈರ್ಯ ಮತ್ತು ದೇಶಪ್ರೇಮದಿಂದ ಹೋರಾಡಿ ಖಳನಾಯಕನನ್ನು ಹೊಸಕಿಹಾಕಿದ ಅಮೆರಿಕದ ಪಡೆಗಳನ್ನು ಅವರು ಮನಸಾರೆ ಅಭಿನಂದಿಸಿದರು.
ವಾಷಿಂಗ್ಟನ್, ಮೇ. 02 : ಅಮೆರಿಕಾದ ಭಯೋತ್ಪಾದನಾ ನಿಗ್ರಹ ದಳ ಒಸಾಮಾನನ್ನು, ಪಾಕಿಸ್ತಾನದ ಮಿಲಿಟರಿ ಅಕಾಡೆಮಿಯಿಂದ 100 ಅಡಿ ದೂರದಲ್ಲಿದ್ದ ಎರಡು ಅಂತಸ್ತಿನ ಕಟ್ಟಡದಲ್ಲಿಯೇ ಹೊಡೆದುಹೊಕಿದ ನಂತರ, ಆತನನ್ನು ಸಾಯಿಸಿದ ಸ್ಥಳ ಮತ್ತೊಂದು ಸ್ಮಾರಕವಾಗಬಾರದೆಂದು, ಆತನನ್ನು ಸಮುದ್ರದಲ್ಲಿ ಎಸೆಯಲಾಗಿದೆ. ಶಾರ್ಕ್ ಗಳಿಗೆ ಭರ್ಜರಿ ಬಿರಿಯಾನಿ ಊಟ! ಅಥವಾ ಆತನನ್ನು ಕಂಡು ಅವುಗಳೂ ಓಡಿಹೋದವೆ?
ಆತನ ಗುರುತು ದೃಢ ಮಾಡಿಕೊಳ್ಳಲು ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ. ಒಸಾಮಾ ಮುಖದ ಗುರುತು ಹಿಡಿಯಲು ಪೇಶಿಯಲ್ ಇಮೇಜಿಂಗ್ ತಂತ್ರಜ್ಞಾನ ಬಳಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪರೀಕ್ಷೆಯ ವರದಿ ಹೊರಬೀಳಲಿದೆ. ಅಲ್ಲಿಯವರೆಗೆ ಸತ್ತುಹೋದವ ಒಸಾಮಾನೇ ಎನ್ನಲು ಅಡ್ಡಿಯಿಲ್ಲ.
ಇಸ್ಲಾಮಿಕ್ ಧರ್ಮದ ರೀತಿರಿವಾಜುಗಳ ಪ್ರಕಾರ ಸತ್ತವರ ದೇಹವನ್ನು ನೀರಿನಿಂದ ತೊಳೆದು ನಂತರ ಹೂಳಲಾಗುತ್ತದೆ. ಆದರೆ, ಕೆಲಬಾರಿ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ಕ್ರಮ ತೆಗೆದುಕೊಂಡು ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಒಬಾಮಾ ಅಧಿಕಾರಿಗಳು ಹೇಳಿರುವುದಾಗಿ ಎಬಿಸಿ ನ್ಯೂಸ್ ವರದಿ ಮಾಡಿದೆ.
ಒಸಾಮಾ ಬಿನ್ ಲಾಡೆನ್ ಸಾಹೇಬ ಸತ್ತಿದ್ದು ಹೇಗೆ?

ಕಾರ್ಯಾಚರಣೆಯಲ್ಲಿ ಒಟ್ಟು 20 ಜನ ಸತ್ತರು. ಆಪರೇಷನ್ ಲಾಡೆನ್ ಮುಗಿಯುತ್ತಿದ್ದಂತೆ ಅವನ ಇಬ್ಬರು ಪತ್ನಿಯರು, ನಾಲ್ವರು ಪುತ್ರರನ್ನು ಅಮೆರಿಕದ ಸೈನಿಕರು ಎತ್ತಿಹಾಕಿಕೊಂಡು ಹೋಗಿದ್ದಾರೆ. ಎಲ್ಲಿಗೆ, ಯಾತಕ್ಕೆ ತಕ್ಷಣಕ್ಕೆ ಗೊತ್ತಿಲ್ಲ.
ಅಂದಹಾಗೆ ಲಾಡೆನ್ ಮಾರ್ಚ್ 10, 1957ರಂದು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದವ. ಅವರಪ್ಪನಿಗೆ 10 ಹೆಂಡತಿಯರು. ಕೆಲವರು ಹೇಳುವ ಪ್ರಕಾರ ಅವ ಪದವಿ ವರೆಗೂ ಓದಿಕೊಂಡಿದ್ದ. ಅಮೆರಿಕಾ, ಕ್ರಿಶ್ಚಿಯನ್ ಜನರ ಬಗ್ಗೆ ಅವನಿಗೆ ಅಸಹನೆ. ಬೈ ದ ವೇ, 'ಆಪರೇಶನ್ 01/05' ಗೆ ಅಮೆರಿಕದ ಅಧ್ಯಕ್ಷ ಒಬಾಮಾ ಶುಕ್ರವಾರವೇ (ಏಪ್ರಿಲ್ 27) ಸುಪಾರಿ ನೀಡಿದ್ದಾರೆ. ಇನ್ನು, ಅಲಬಾಮಾಗೆ ಪ್ರವಾಸಕ್ಕೆ ತೆರಳುವ ಮುನ್ನ ರಾಜತಾಂತ್ರಿಕ ಕೊಠಡಿಯಲ್ಲಿ ಏಪ್ರಿಲ್ 29ರಂದು ಬೆಳಗ್ಗೆ 8.20 ಕ್ಕೆ ಒಬಾಮಾ ಸುಪಾರಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ಆದರೆ ಕಾರ್ಯಾಚರಣೆ ಎಷ್ಟು ರಹಸ್ಯವಾಗಿತ್ತೆಂದರೆ ಒಬಾಮಾ ಆಡಳಿತದ ಕೆಲವೇ ಮಂದಿಗೆ ಮಾತ್ರ ಇದರ ಬಗ್ಗೆ ಮಾಹಿತಿ ಇತ್ತು. ಇನ್ನು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆಯೂ ಕಡಿಮೆಯೇ. ತನಗೆ ಹೆಚ್ಚು ಅನಾಹುತವಾಗುವುದು ಬೇಡ ಎಂಬುದು ಅಮೆರಿಕದ ಲೆಕ್ಕಾಚಾರವಾಗಿತ್ತು. ಕಾರ್ಯಾಚರಣೆಯಲ್ಲಿ ಬಳಸಲಾದ ಹೆಲಿಕಾಪ್ಟರ್ ಗಳು ಎಂಥವು, ಯಾರೆಲ್ಲ ಪಾಲ್ಗೊಂಡಿದ್ದರು ಎಂಬುದರ ಬಗ್ಗೆ ಗೌಪ್ಯತೆ ಕಾಪಾಡಲಾಗಿದ್ದು, ಅವುಗಳ ವಿವರಗಳನ್ನು ಬಹಿರಂಗಪಡಿಸಿಲ್ಲ.ದಾಳಿಯ ವೇಳೆ ಒಂದು ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ನೆಲದ ಮೇಲೆ ಬಿದ್ದಿತ್ತು. ಆದರೆ ಅಮೆರಿಕ ಸೇನೆ ಗೌಪ್ಯತೆಯ ದೃಷ್ಟಿಯಿಂದ ತಕ್ಷಣ ಅದನ್ನು ಸಂಪೂರ್ಣವಾಗಿ ನಾಶಮಾಡಿದೆ.
ಓವರ್ ಟು ಅಬೊತಾಬಾದ್ ನಗರ: ನಗರದ ಹೊರಭಾಗದಲ್ಲಿ ಪಾಕಿಸ್ತಾನದ ಮಿಲಿಟರಿ ಅಕಾಡೆಮಿ ಇದೆ. ಅಲ್ಲಿ ಬ್ರಿಗೇಡಿಯರ್ ಸ್ಥಾನದ ಅಧಿಕಾರಿ ಮತ್ತು ಸಾವಿರಾರು ಯೋಧರು ತರಬೇತಿಯಲ್ಲಿರುತ್ತಾರೆ. ಅಲ್ಲಿಂದ ಕೂಗಳತೆಯಲ್ಲಿ ಕೃಷಿ ಜಮೀನಿನಲ್ಲಿ 18 ಅಡಿ ಎತ್ತರದ ಬಿಳಿ ಗೋಡೆಗಳಿಂದ ಸುತ್ತುವರಿದ ಎರಡು ಅಂತಸ್ತಿನ ಐಷಾರಾಮಿ ಮನೆಯಲ್ಲಿ ಲಾಡೆನ್ ತನ್ನ ಪರಮಾಪ್ತ ಬಂಟರು, ಮಕ್ಕಳು ಮರಿಗಳೊಂದಿಗೆ ವಾಸ್ತವ್ಯ ಹೂಡಿದ್ದ. ಈ ಮನೆಗೆ ದೂರವಾಣಿ, ಟಿವಿ ಸವಲತ್ತುಗಳು ಇರಲಿಲ್ಲ. ಹೆಚ್ಚು ಕಿಟಕಿ, ಬಾಗಿಲುಗಳೂ ಇರಲಿಲ್ಲ. ಕಳೆದ ಆಗಸ್ಟ್ ನಲ್ಲಿ ಅಮೆರಿಕದ ಬೇಹುಗಾರಿಕೆಗೆ ಲಾಡೆನ್ ಇಲ್ಲಿ ಅಡಗಿರುವ ಬಗ್ಗೆ ವಾಸನೆ ಬಡಿದಿತ್ತು.
ಬ್ರಿಟನ್ನಿನ ಸೇನಾಧಿಕಾರಿ ಮೇಜರ್ ಜೇಮ್ಸ್ ಅಬೋತ್ ಈ ಪಟ್ಟಣವನ್ನು 1853ರಲ್ಲಿ ನಿರ್ಮಿಸಿದ. ಆತನ ಹೆಸರಿನಲ್ಲಿಯೇ ಇದನ್ನು ಅಬೋತಾಬಾದ್ ಎಂದು ಕರೆಯಲಾಗುತ್ತಿದೆ. ಪಾಕಿಸ್ತಾನ ಮತ್ತು ಚೀನಾವನ್ನು ಸಂಪರ್ಕಿಸುವ ಕಾರಾಕೊರಮ್ ಹೆದ್ದಾರಿಗೆ ಈ ಪಟ್ಟಣ ಹೊಂದಿಕೊಂಡಂತಿದೆ. 2005ರಲ್ಲಿ ಈ ಅಡಗುತಾಣದ ನಿರ್ಮಾಣವಾಗಿತ್ತು. ಆಗಿನಿಂದಲೇ ಇದು ಉಗ್ರರ ಕಾರ್ಖಾನೆ ಆಗಿತ್ತು.
ಒಳಗೆ ವಾಸಿಸುತ್ತಿದ್ದವರು ಸ್ಥಳೀಯ ಜನರ ಜತೆ ಎಂದಿಗೂ ಬೆರೆಯುತ್ತಿರಲಿಲ್ಲ. ಸ್ಥಳೀಯರ ಪ್ರಕಾರ ಮೂರು ಹೆಲಿಕಾಪ್ಟರ್ ಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು. ಅನೇಕ ಬಾರಿ ಭಾರಿ ಸ್ಫೋಟಗಳು ಜತೆಗೆ ಭಾರಿ ಗುಂಡಿನ ಕಾಳಗ ನಡೆದಿದೆ. ಕೊನೆಗೆ ಲಾಡೆನ್ ನೆತ್ತಿಗೆ ಗುಂಡು ಬಿದ್ದಾಗ ಸಾವನ್ನಪ್ಪಿದ್ದಾನೆ. ಅವನ ಇಬ್ಬರು ಪತ್ನಿಯರು, ಮಕ್ಕಳು, ಮೊಮ್ಮಕ್ಕಳು ಇದೇ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ.
ದಾಳಿಯಲ್ಲಿ ಲಾಡೆನ್, ಒಬ್ಬ ಪುತ್ರ, ಇಬ್ಬರು ಸೇವಕರು, ಒಬ್ಬ ಮಹಿಳೆ ಹತ್ಯೆಗೀಡಾಗಿದ್ದಾಳೆ. ಲಾಡೆನ್ ನ ಹೆಂಡತಿಯರು ಎನ್ನಲಾದ ಇಬ್ಬರು ಮಹಿಳೆಯರು ಮತ್ತು ಅವನ ನಾಲ್ವರು ಪುತ್ರರನ್ನು ದಾಳಿಯ ನಂತರ ಈ ಅಡಗುದಾಣದಿಂದ ಕರೆದೊಯ್ಯಲಾಗಿದೆ. ಎಲ್ಲಿಗೆ ಎಂಬ ಬಗ್ಗೆ ಸುಳಿವಿಲ್ಲ.
ಅಲ್ ಖೈದಾ ಉಗ್ರಗಾಮಿ ಸಂಘಟನೆಯ ಅತ್ಯಂತ ಪ್ರಭಾವಿ ಸದಸ್ಯನಾಗಿದ್ದ ಒಸಾಮಾ ಬಿನ್ ಮುಹಮ್ಮದ್ ಬಿನ್ ಅವಾದ್ ಬಿನ್ ಲಾಡೆನ್ ಸತ್ತು ನೆಗೆದುಬಿದ್ದಿದ್ದಾನೆ. ಪಾಕಿಸ್ತಾನದ ಕಾಲಮಾನ ಸೋಮವಾರ ಮುಂಜಾನೆ 1.15 ಅವನ ರಕ್ತ ಹೀರಿ ಸಾಯಿಸಿದವರು ಅಮೆರಿಕದ ಸೈನಿಕರು. 11 ಸೆಪ್ಟೆಂಬರ್ 2001ರಂದು ನ್ಯೂಯಾರ್ಕಿನಲ್ಲಿ ಸಂಭವಿಸಿದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯಲ್ಲಿ ಒಸಾಮಾನ ಕೈವಾಡವಿತ್ತು. ಅಮಾಯಕರ ಸಾವು ನೋವುಗಳಿಗೆ ಕಾರಣವಾಗುವುದಲ್ಲದೆ, ಇಡೀ ಪ್ರಪಂಚದ ಆರ್ಥಿಕ ಸ್ಥಿತಿಯನ್ನು ಧ್ವಂಸ ಮಾಡಿ ಕೇಕೆ ಹಾಕಿ ಅವನು ನಕ್ಕಿದ್ದ.
ಆವತ್ತಿನಿಂದ ಅವನ ಮೇಲೆ ಅಮೆರಿಕಾಗೆ ತುಂಬ ಕೋಪ. ಹೇಗಾದರೂ ಮಾಡಿ ಅವನನ್ನು ಮುಗಿಸಬೇಕು ಎಂದು ಅಮೆರಿಕಾದ ಭದ್ರತಾ ಸಿಬ್ಬಂದಿ ಪ್ರಯತ್ನ ಪಡುತ್ತಲೇ ಇದ್ದರು. ಕೊನೆಗೂ ಅವನ ಜಾಡು ಹುಡುಕಿ ಸಾಯಿಸುವುದಕ್ಕೆ ದೊಡ್ಡಣ್ಣನಿಗೆ ಹತ್ತು ವರ್ಷ ಬೇಕಾಯಿತು. ಇಷ್ಟು ಸಣ್ಣ ಕೆಲಸಕ್ಕೆ ಹತ್ತು ವರ್ಷ ತೆಗೆದುಕೊಂಡ ಅಮೆರಿಕಾಗೆ ಶೇಮ್ ಶೇಮ್.
ಇವತ್ತು ಜಾಗತಿಕ ಸುದ್ದಿ ಮಾರುಕಟ್ಟೆಯಲ್ಲಿ ಬರೀ ಲಾಡೆನ್ ಸಮಾಚಾರವೇ ತುಂಬಿಕೊಂಡಿದೆ. ನಮ್ಮ ವೆಬ್ ಸೈಟಿನಲ್ಲಿ ಅವನ ಸಾವು ಮತ್ತು ಅಮೆರಿಕನ್ನರ ಸಂತೋಷವನ್ನು ತಿಳಿಸುವ ಕೆಲವಾರು ಸುದ್ದಿ ಚಿತ್ರಗಳನ್ನು ಪ್ರಕಟಿಸಲಾಗಿದೆ. ಒಟ್ಟಿನಲ್ಲಿ ಅವನ ತಿಥಿ ಆಯಿತು. ಲಾಡೆನ್ ಕೈಲಾಸ ಸಮಾರಾಧನೆಯ ಕೆಲವು ಸುದ್ದಿ ತುಣುಕುಗಳು ಇಲ್ಲಿವೆ. ಓದಿರಿ.
ಒಸಾಮಾ ಬಿನ್ ಲಾಡೆನ್ ಕೈಲಾಸ ಸಮಾರಾಧನೆ

ಆವತ್ತಿನಿಂದ ಅವನ ಮೇಲೆ ಅಮೆರಿಕಾಗೆ ತುಂಬ ಕೋಪ. ಹೇಗಾದರೂ ಮಾಡಿ ಅವನನ್ನು ಮುಗಿಸಬೇಕು ಎಂದು ಅಮೆರಿಕಾದ ಭದ್ರತಾ ಸಿಬ್ಬಂದಿ ಪ್ರಯತ್ನ ಪಡುತ್ತಲೇ ಇದ್ದರು. ಕೊನೆಗೂ ಅವನ ಜಾಡು ಹುಡುಕಿ ಸಾಯಿಸುವುದಕ್ಕೆ ದೊಡ್ಡಣ್ಣನಿಗೆ ಹತ್ತು ವರ್ಷ ಬೇಕಾಯಿತು. ಇಷ್ಟು ಸಣ್ಣ ಕೆಲಸಕ್ಕೆ ಹತ್ತು ವರ್ಷ ತೆಗೆದುಕೊಂಡ ಅಮೆರಿಕಾಗೆ ಶೇಮ್ ಶೇಮ್.
ಇವತ್ತು ಜಾಗತಿಕ ಸುದ್ದಿ ಮಾರುಕಟ್ಟೆಯಲ್ಲಿ ಬರೀ ಲಾಡೆನ್ ಸಮಾಚಾರವೇ ತುಂಬಿಕೊಂಡಿದೆ. ನಮ್ಮ ವೆಬ್ ಸೈಟಿನಲ್ಲಿ ಅವನ ಸಾವು ಮತ್ತು ಅಮೆರಿಕನ್ನರ ಸಂತೋಷವನ್ನು ತಿಳಿಸುವ ಕೆಲವಾರು ಸುದ್ದಿ ಚಿತ್ರಗಳನ್ನು ಪ್ರಕಟಿಸಲಾಗಿದೆ. ಒಟ್ಟಿನಲ್ಲಿ ಅವನ ತಿಥಿ ಆಯಿತು. ಲಾಡೆನ್ ಕೈಲಾಸ ಸಮಾರಾಧನೆಯ ಕೆಲವು ಸುದ್ದಿ ತುಣುಕುಗಳು ಇಲ್ಲಿವೆ. ಓದಿರಿ.